Monday, July 26, 2010

ಮುಂಗಾರು ಮಳೆ

ಮುಂಗಾರು ಮಳೆ
ಸುತ್ತಲು ಹಸಿರು, ಮಂಜು ಮುಸುಕಿನ ತಣ್ಣನೆಯ ಗಾಳಿ ಇಷ್ಟು ಸಾಕಲ್ಲವೇ ಪ್ರೆಮಿಗಳಾಗಲಿ ,,,,,,,, ಕವಿಗಳಾಗಲಿ ,,,,,,,
ಮೈಮರೆತು ಹಾಡಿ ಕುಣಿದು ಮನಸ್ಸಿನ ಭಾವನೆಗಳನ್ನು ಹೊರಹಾಕಲು. ನವ ಪ್ರೆಮಿಗಳೆಲ್ಲಾ ಮುಂಗಾರು ಮಳೆಯ
ದ್ರಷ್ಯವನ್ನೇ ನೆನಪಿಸಿಕೊಂಡು ಮನದಲ್ಲೇ ಅಂದುಕೊಳ್ಳುತ್ತಾರೆ,,,,,,,,, ಅನಿಸುತೆದೆ ಯಾಕೂ ಇಂದು ನೀನೇನೆ ನನ್ನವಳೆಂದು.......
ಒಂದು ಮಾತ್ರ ಸತ್ಯ ಈ ಹಾಡು ಕೇವಲ ಪ್ರೆಮಿಗಲಿಗಷ್ಟೇ ಅಲ್ಲ ಎಲ್ಲಾ ವಯೋಮಾನದವರಿಗೂ ಇಷ್ಟ. ಅದು ಅವರವರ ಅನುಭವದ ಮೇಲೆ..
ಅರ್ಥವನ್ನು ಕೊಡುತ್ತದೆ........ ನೋಡಿ ... ಪ್ರೇಮಿಗಳಿಗೆ !!!!!! ಒಬ್ಬರನ್ನೊಬ್ಬರು ಬಿಟ್ಟಿರಲಾರದೆ ಅವರನ್ದುಕೊಲ್ಲುತ್ತಾರೆ ಅನಿಸುತಿದೆ............
ಇನ್ನು ಕೆಲವು ಜನರಿಗೆ ಬೇರೆ ರೀತಿಯ ಭಾವನೆಯನ್ನು ಹುಟ್ಟಿಸಿದೆ ಈ ಹಾಡು????????? ಮದುವೆಯಾಗಿ ವರ್ಷ ಕಳೆದವರಿಗೆ,,,,,,,,,,,,,.
ಕೆಲವರಿಗೆ ಹೀಗೂ ಅನಿಸಿರಲು ಸಾಕು,,,, " ಅನಿಸುತುದೆ ಯಾಕೊ ಇಂದು (ಹೆಂಡತಿಯ ಹೆಸರಿರಲೂ ಬಹುದು) ನೀನೇನೆ? ನನ್ನ ಅವಳೆಂದು? ,,,,,,,,,"
ಅದು ಲವ್ ಮ್ಯಾರೇಜ್ ಆದರಂತೂ ಇನ್ನೂ ಬ್ರಮನಿರಸನಗೊಂಡು,,,,,,,, ಮದುವೆಗೆ ಮುಂಚೆ ಚನ್ನಾಗಿ ಹೊಂದಿಕೊಂಡು ದಿನಕಳೆದಂತೆ ಇವನ ಸ್ವಭಾವದಿಂದಲೋ ...
ಅಥವಾ ಅದೇ ಅವಳ ಸ್ವಭಾವವೋ,,,,, ಇವನಿಗೆ ಅವಳು ಸರಿಯಾಗಿ ಅರ್ಥವಾಗಿಲ್ಲವೋ ಆಗ ಅನಿಸುವುದು ಹೀಗೇನೆ ..............

Thursday, July 22, 2010

ತಲೆ ಬಿಸಿ
ಹಿಂದಿನ ತಿಂಗಳುಊರಿಗೆ ಹೋಗಿದ್ದೆ, ತಂಗಿ ಮದುವೆಯ ತಯಾರಿಗೆ.
ತಂಗಿ ಅಂದ್ರೆ ಚ್ಚಿಕ್ಕಪ್ಪನ ಮಗಳು, ನಮಗೆ ಅಕ್ಕತಂಗಿಯರಿಲ್ಲ ನನ್ನ ಚ್ಚಿಕ್ಕಪ್ಪಂಗೆ
ಗಂಡುಮಕ್ಕಳು ಇಲ್ಲಾ, ಅಣ್ಣನ ಸ್ಥಾನದಲ್ಲಿ ನಿಂತು ಮದುವೆ ಮಾಡಬೇಕಲ್ಲ ಅದಕ್ಕೆ.
ಯಜನಾಮನ ಗಾಂಭಿರ್ಯದಲ್ಲೇ ನನ್ನ ನಡೆಗಳಿದ್ದವು. ನಾನು ಬೆಂಗಳೂರಲ್ಲಿ
ಉದ್ಯೋಗದಲ್ಲಿ ಇದ್ದುದರಿಂದ ಸ್ವಲ್ಪ ಜಾಸ್ತಿನೀ ಮರ್ಯಾದೆ ಸಿಕ್ಕಿತು. ಹಾಗೆ
ಮಾತನಾಡುತ್ತ ಚಿಕ್ಕಪ್ಪ ಕೇಂದ್ರ ಸರ್ಕಾರದ ಯೋಜನೆಯೊಂದನ್ನ
ಕೈಗೆತ್ತಿಕೊಂಡಂತೆ ಮನೆಯಲ್ಲಿ ನಡೆಯುತ್ತಿರುವ ಕೆಲಸದ ಬಗ್ಗೆ ಹೇಳಿದ್ರು,
ಆದ್ರೆ ಮುಖದಲ್ಲಿ ತೆನ್ಷನ್ನು ಇತ್ತು. ವಿಷಯ ಏನೆಂದು ಕೇಳಿದೆ, ಹಾಗೆ ಬಿಡುವ
ಜಾಯಮಾನ ನನ್ನದಲ್ಲ. ಏನಿಲ್ಲ ತುಂಬಾ ದಿನದಿಂದ ಸಾವಿತ್ರಿ ತಲೆ ತಿಂತಿತ್ತು...
ಯಲ್ಲರ್ಮನೆಲ್ಲು ಮನೆಲ್ಲೇ ಸಂಡಾಸ್ ಮಾಡಿದ್ದ.... ಹಿಸೆಯಾಗಿ ಐದು ವರ್ಷ
ಆದ್ರೂ ನಮಗೊಂದು 'ಸಂಡಾಸ್' ಮಾಡಲ್ಲಾಜಿಲ್ಲೇ ಹೊಸಬೀಗ್ರು ಬತ್ತ
ಅವರ್ಯದ್ರಿಗೆ ಸುಮಾರಾಗ್ತು, ನಮ್ಮಲ್ಲೂ 'ಸಂಡಾಸ್' ಆಗವು ಹೇಳಿ...ಅಂದ.
ಹಾಗೆ ಹೇಳುತ್ತಾ... ಮಳೆಗಾಲ ಬೇರೆ ಶುರುವಾತು ಆಳ್ಗ ಶಿಗ್ತ್ವಿಲ್ಲೇ 'ಸಂಡಾಸಿಗೆ'
ಕೈಹಾಕ್ಯಂಡು ಭಾರಿ ಹೊಲಸ್ ಕೆಲ್ಸಾಗೊತು..... ಇನ್ನು ಹತ್ತುಹನ್ನೆರ್ಡುದಿನಕ್ಕೆ
ಮದುವೆ ಅಷ್ಟರಲ್ಲಿ ಕಾರ್ಯಾ ಮುಗ್ಸವು ಒಬ್ಬನೇ ಬ್ಯಾರೆ ಯಂತಮಾಡವು?.....
ಇವೆಲ್ಲ ಸಹಜ 'ಸಂಡಾಸ್' ತಾನೇ ಆಗುತ್ತೆ ನೀನು 'ಅದನ್ನೇ' ತಳಿಗೆ ಹಚ್ಚಕೊಬೇಡಾ
ಎಲ್ಲರ್ಮನೆಲ್ಲು ಆಗುತ್ತೆ ಎಂದು ಸಮಾದಾನ ಹೇಳಿದೆ. ಅಷ್ಟರಲ್ಲಿ ಸಾವಿತ್ರಿ 'ಟೀ'
ತಗಂಡು ಬಂದಳು,,,, ಬಂದವಳೇ 'ಸಂಡಾಸಿಗೆ' ಬಾಯ್ಹಾಕಿದಳು!!!!!!!!
ಇಗ ಮತ್ತೆ ಅದಕ್ಕೇ ಬಾಯಿಹಾಕಬೇಡಾ ಪ್ರಬಾಕಣ್ಣಯ್ಯಾ ಹೇಳಿ ಮುಗಿಸಿದ್ದ
ಇದನ್ನ ಇಲ್ಲಿಗೇ ಮುಗಿಸಿಬಿಡಿ ನಾನು ಬಂದಿದ್ದೇನೆ
ಯಾರು ಇದಕ್ಕೆ ಬಾಯಿಹಾಕಬೇಡಿ...........
ಪದೇ ಪದೇ 'ಸಂಡಾಸನ್ನ' ತಳಿಗೆ ಹಚ್ಹ್ಚಿಕೊಬೇಡಿ..........
ಅಂತ ಹೇಳಿ ಸಮಾದಾನ ಮಾಡಿದೆ. ನೀವು ಅಷ್ಟೇ ಇದನ್ನೇ ತಳಿಗೆ ಹಚ್ಹ್ಚಿಕೊಬೇಡಿ......

Followers